ಬೆಂಗಳೂರಿನ ಟ್ರಾಫಿಕ್ ಪರಿಧಿ ದಾಟಿ, ಮೈಸೂರಿನ ಕಡೆಗೆ , ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ, "ಪದ" ಹಾಗೂ "ಕನ್ನಡ ಮತ್ತು ಸಂಸ್ಕೃತಿ ಇಲಾಖೆ" ವತಿಯಿಂದ ಪ್ರತಿ ಬುಧವಾರ ನಡೆಯುವ "ಕನ್ನಡ ಚಿಂತನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ" ವನ್ನು ಆಸ್ವಾದಿಸುವ ಭಾಗ್ಯ ಜೂನ್ ೨೯ರಂದು ನನ್ನದಾಯಿತು. ಒಂದೇ ಸಮನೆ ನಿಲ್ಲದೆ ಸುರಿಯುತ್ತಿದ್ದ ಮಳೆ, ವಿಶ್ವವಿದ್ಯಾಲಯದ ಹಚ್ಚ ಹಸಿರು ಆವರಣ , ಮೈ ಮರೆಸಿದ ಖ್ಯಾತ ಜಾನಪದ ಗಾಯಕ "ಶ್ರೀ ಶಂಕರ ಭಾರತೀಪುರ" ಅವರ ಜಾನಪದ ಗಾನ, ಮುಂದೆ ಬರುವ ನಾಟಕ "ಭ್ರಮೆ"ಗೆ ನಮ್ಮನೆಲ್ಲ ಸಜ್ಜು ಮಾಡುವಂತಿತ್ತು. ಇಷ್ಟು ದೂರ ಕಲಾಗ್ರಾಮದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ, ಮಳೆಯನ್ನು ಲೆಕ್ಕಿಸದೇ , ಕನ್ನಡ ನಾಟಕ ನೋಡಲು ಬಂದ ಪ್ರೇಕ್ಷಕರನ್ನು ಮೆಚ್ಚಲೇಬೇಕು. ಇಂತಹ ಅಭಿಮಾನಿಗಳಿಂದಲೇ ಇಂದಿಗೂ ನಮ್ಮ ಶ್ರೀಮಂತ ಸಾಹಿತ್ಯ ಉತ್ತುಂಗದಲ್ಲಿರುವುದು.
ಭ್ರಮೆ :
ಭೂತವೋ? , ದೆವ್ವವೋ ? , ಅಥವಾ ಹಿರಿ ಸ್ಟೇಷನ್ ಮಾಸ್ಟರ್ "ರಂಗಣ್ಣ"ನ ಭ್ರಮೆಯೋ? ಅದೊಂದು ಧ್ವನಿ, ಮತ್ತೆ ಸ್ಟೇಷನ್ ಟೆಲೆಗ್ರಾಫ್ ತಂತಿ ಮಾಡುವ "ಕಟ ಕಟ ", ರಂಗಣ್ಣನಿಗೆ ಮಾತ್ರ ಕೇಳುವ ಫೋನ್ ಕರೆ, ಮತ್ತೆ ಆ ಧ್ವನಿ " ಏ ಅಲ್ಲಿ , ನೀನೇ , ಅಲ್ಲಿ !!" .... ಪ್ರತೀ ಸಲ ರಂಗಣ್ಣನ ಕಿವಿಗೆ ಈ ಶಬ್ದಗಳು ಬಿದ್ದ ಕೂಡಲೇ ರಂಗಣ್ಣ ಹೆದರಿ ಕಂಗಾಲಾಗುವನು ! ಆ ಶಬ್ದಗಳು, ಆ ಕರೆ , ಮುಂದೆ ಆಗುವ ದೊಡ್ಡ ಅನಾಹುತದ ಸೂಚನೆ ! ಆ ಮುಖ ತೋರದ , ಸುರಂಗದ ಆಚೆಯಿಂದ ಕೂಗುವ ಮನುಷ್ಯ , ಸಾವಿನ ಸೂಚನೆ ನೀಡುವ ರಾಯಭಾರಿ, ಹೀಗೆ ಆದಾಗ ಪ್ರತಿ ಸಲವೂ ಒಂದು ಅಪಘಾತ - ಸಾವು ಖಂಡಿತ !! ... ರಂಗಣ್ಣನ ಚಡಪಡಿಕೆ ತೋಡಿಕೊಳ್ಳಲು ಯಾರು ಇಲ್ಲ , ಆಫೀಸಿಗೆ ಹೇಳಲು ಯಾವ ಸಾಕ್ಷಿಗಳು ಇಲ್ಲ , ಕೆಲಸ ಕಳೆದು ಕೊಂಡರೆ ಮುಂದೇನು ಎನ್ನುವ ಭಯ.
ಆಗಂತುಕನೊಬ್ಬ ಸ್ಟೇಷನ್ನಿಗೆ ಬಂದಾಗ, ರಂಗಣ್ಣ ತನ್ನ ತೊಳಲನ್ನು ಹೇಳಿಕೊಳ್ಳುತ್ತಾನೆ ! ಮುಂದೇನಾಗುವುದೋ ತಿಳಿಯಲು "ಭ್ರಮೆ" ನೋಡಿ ...

ಅಯ್ಯೊ, ನಾನು ಬೆಂಗಳೂರಿನಲ್ಲಿ ಇಲ್ಲ. ದಯವಿಟ್ಟು ಮುಂದೇನಾಯಿತು ಹೇಳಿರಿ!
ReplyDeleteಸುನಾಥ್ ಸಾರ್ , ಮುಂದೆ ಮುಂದೆ..... ಮುಂದೆ... ಹೇಳೋದಿಲ್ಲ ಹೋಗಿ...
ReplyDelete